ಎರಡು ಚಿಗಳಿಗಳ ದ್ರವ ಆಹಾರದ ಕೊಡುಕೊಳ್ಳುವಿಕೆ (ಟ್ರೋಫೊಲಾಕ್ಸಿಸ್) ಓಕೋಫಿಲ್ಲಾ ಸ್ಮಾರಾಗ್ಡಿನಾ ಕರ್ನಾಟಕದ ಮಲೆನಾಡಿನಲ್ಲಿ‘ವೀವರ್ ಯ್ಯಾಂಟ್’ ಎನ್ನುವ ಪುಟ್ಟ ಇರುವೆಗಳು ಕುತೂಹಲವನ್ನು ಉಂಟುಮಾಡುತ್ತವೆ. ಮಲೆನಾಡಿನಲ್ಲಿ ಇವನ್ನು ಚಿಗಳಿ, ಚಿಗುಳಿ, ಚವುಳಿ ಎಂದು ಕರೆಯುತ್ತಾರೆ. ಮರಗಳಲ್ಲಿ ಎಲೆಗಳನ್ನು ಒಟ್ಟು ಸೇರಿಸಿ ಗೂಡು ಕಟ್ಟಿ ವಾಸ ಮಾಡುತ್ತವೆ. ಇವು ನಮ್ಮಲ್ಲಿ ಮಾತ್ರವಲ್ಲದೆ ಶ್ರೀಲಂಕಾ, ಇಂಡೋನೇಷ್ಯಾ, ಫಿಲಿಪ್ಪೀನ್ಸ್, ಆಸ್ಟ್ರೇಲಿಯಾಗಳಲ್ಲೂ ಕಂಡುಬರುತ್ತವೆ, ಆದರೆ ಅವು ಹೆಚ್ಚು ಉಗ್ರವಾದವು. ಚಿಗಳಿಗಳು ಗೂಡು ಕಟ್ಟುವ ಬಗೆ ಕುತೂಹಲಕರ. ತಮ್ಮ ದೇಹದಿಂದ ಉತ್ಪತ್ತಿಯಾಗುವ ಒಂದು ಬಗೆಯ ರೇಷ್ಮೆಯನ್ನು ಉಪಯೋಗಿಸಿ, ಎಲೆಗಳನ್ನು ಎಳೆದು ಅಂಟು ಹಾಕಿ ಇವು ಗೂಡು ಕಟ್ಟುತ್ತವೆ. ಇವನ್ನು ಕೆಲವರು ಆಹಾರವಾಗಿಯೂ ಉಪಯೋಗಿಸುತ್ತಾರೆ. ಕಚ್ಚಿದರೆ ಸಾಮಾನ್ಯಕ್ಕೆ ಬಿಡುವುದಿಲ್ಲ. ಇವು ಬೇರೆ ದೇಶಗಳ ಇರುವೆಗಳಂತೆ ಮನುಷ್ಯರಿಗೆ ಇವುಗಳಿಂದ ಪ್ರಾಣಾಪಾಯವಿಲ್ಲ, ಮತ್ತು ಸ್ವಲ್ಪ ದದ್ದುಗಳು ಏಳುತ್ತವೆ ಬೇಗ ಗುಣವಾಗುತ್ತವೆ. ಹುಳಿವಾಸನೆ ರುಚಿ ಇರುತ್ತವೆ. ಗೂಡು ಕಟ್ಟುತ್ತಿರುವ ಫೋಟೋ-:
[೧]