dcsimg

ಬೆಳ್ಳುಳ್ಳಿ ( Kannada )

provided by wikipedia emerging languages
 src=
ಬೆಳ್ಳುಳ್ಳಿ

ಆಲಿಯಮ್ ಸ್ಯಾಟೀವಮ್, ಸಾಮಾನ್ಯವಾಗಿ ಬೆಳ್ಳುಳ್ಳಿ ಎಂದು ಪರಿಚಿತವಿರುವ ಈರುಳ್ಳಿ ಪಂಗಡ ಆಲಿಯಮ್‍ನಲ್ಲಿನ ಒಂದು ಜಾತಿ. ಅದರ ನಿಕಟ ಸಂಬಂಧಿಗಳು ಈರುಳ್ಳಿ, ಶ್ಯಾಲಟ್, ಲೀಕ್, ಚೈವ್ ಮತ್ತು ರ್‍ಯಾಕ್ಯೊವನ್ನು ಒಳಗೊಂಡಿವೆ. ೭,೦೦೦ ವರ್ಷಕ್ಕಿಂತ ಹೆಚ್ಚು ಮಾನವ ಬಳಕೆಯ ಇತಿಹಾಸವಿರುವ ಬೆಳ್ಳುಳ್ಳಿಯು ಮಧ್ಯ ಏಷ್ಯಾಕ್ಕೆ ಸ್ಥಳೀಯವಾಗಿದೆ ಮತ್ತು ಮೆಡಿಟರೇನಿಯನ್ ಪ್ರದೇಶದಲ್ಲಿ ಬಹಳ ಕಾಲದಿಂದ ಮುಖ್ಯ ಆಹಾರವಾಗಿದೆ, ಮತ್ತು ಏಷ್ಯಾ, ಆಫ಼್ರಿಕಾ, ಹಾಗು ಯೂರೋಪ್‍ನಲ್ಲಿ ಆಗಾಗ ಬಳಸುವ ರುಚಿಕಾರಕವಾಗಿದೆ.

ಉಪಯೋಗಗಳು

  • ಮೂಲ್ಯವ್ಯಾಧಿ,ಮಲಬದ್ಧತೆ,ಕಿವಿನೋವು,ರಕ್ತದೊತ್ತಡ ಇತ್ಯಾದಿ ಅನೇಕ ಕಾಯಿಲೆಗಳಿಗೆ ಇದು ರಾಮಬಾಣ.
  • ಹಸಿವನ್ನು ಹೆಚ್ಚಿಸುವ ಕೆಲಸವನ್ನು ಇದು ಮಾಡುತ್ತದೆ.
  • ಬೆಳ್ಳೆಗ್ಗೆ ಬೆಳ್ಳುಳ್ಳಿ ಸೇವಿಸಿದ ಒಂದು ಗಂಟೆಯಲ್ಲಿ ಜೀರ್ಣವಾಗಿ ಅದು ಆರೋಗ್ಯ ವೃದ್ಧಿ ಮಾಡುತ್ತದೆ.
  • ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಶರೀರದಲ್ಲಿ ವಿಷ ಪದಾರ್ಥವನ್ನು ಮಲ ಹಾಗೂ ಮೂತ್ರದ ಮೂಲಕ ಹೊರ ಹಾಕುತ್ತದೆ.
  • ದೇಹದ ಆಲ್ಯಸ ಕಡಿಮೆ ಮಾಡಿ ಶರೀರಕ್ಕೊಂದು ವಿಶೇಷ ಶಕ್ತಿ ಕೊಡುತ್ತದೆ.
  • ಹುರಿದ ಬೆಳ್ಳುಳ್ಳಿಯನ್ನು ಸೇವನೆ ಮಾಡುವುದರಿಂದ ಕ್ಯಾನ್ಸರ್ ಕೋಶಗಳು ಶಕ್ತಿ ಕಳೆದುಕೊಳ್ಳುತ್ತವೆ.
  • ಪ್ರತಿದಿನ ಹುರಿದ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಚಯಾಪಚಯ ಕ್ರಿಯೆ ಸುಲಭವಾಗಿ ದೇಹದ ಬೊಜ್ಜು ಕರಗಿಸುವಲ್ಲಿ ಸಹಾಯ ಮಾಡುತ್ತದೆ.
  • ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಶ್ವಾಸನಾಳಕ್ಕೆ ಬಹಲ ಪ್ರಯೋಜನಕಾರಿಯಾಗಿದೆ.
  • ಅಸ್ತಮಾ,ಕೆಮ್ಮು,ಕಫ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.[೨]

ಪೋಷಕಾಂಶಗಳು

೧೦೦ ಗ್ರಾಂ ಬೆಳ್ಳುಳ್ಳಿಯಲ್ಲಿರುವ ಪೋಷಕಾಂಶಗಳು

ಉಲ್ಲೇಖಗಳು

  1. The Plant List, Allium sativum L.
  2. http://kannada.webdunia.com/article/health-tips-in-kannada/top-seven-health-benefits-of-garlic-116082600009_1.html
license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ಬೆಳ್ಳುಳ್ಳಿ: Brief Summary ( Kannada )

provided by wikipedia emerging languages
 src= ಬೆಳ್ಳುಳ್ಳಿ